Sunday, November 24, 2024

ಆರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

ಕನಿಷ್ಠ ಬೆಂಬಲ ಬೆಲೆ ಎಂದರೆ ಸರ್ಕಾರವು ರೈತರಿಂದ ಧಾನ್ಯವನ್ನು ಖರೀದಿಸುವ ದರವಾಗಿದೆ. ಪ್ರಸ್ತುತ ಸರ್ಕಾರವು ಖಾರಿಫ್ (ಮುಂಗಾರು) ಮತ್ತು ರಾಬಿ(ಹಿಂಗಾರು) ಋತುಗಳಲ್ಲಿ ಬೆಳೆಯುವ 23 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಗಳನ್ನು ನಿಗದಿಪಡಿಸುತ್ತದೆ. ಪ್ರತಿ ಕ್ವಿಂಟಾಲ್ ಗೆ 500  ರೂ. ಗೆ ಬೇಳೆ( ಮಸೂರ್)  ಗೆ   MSPಯಲ್ಲಿ ಸಂಪೂರ್ಣ ಗರಿಷ್ಠ ಹೆಚ್ಚಳವನ್ನು ಅನುಮೋದಿಸಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

 2023 24 ರ  ಮಾರ್ಕೆಟಿಂಗ್ ಋತುವಿಗಾಗಿ ಎಲ್ಲಾ ರಾಬಿ  ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು (MSP) ಕೇಂದ್ರ ಸಂಪುಟ ಅನುಮೋದಿಸಿದೆ. ಪ್ರತಿ ಕ್ವಿಂಟಾಲ್ ಗೆ 500  ರೂ. ಗೆ ಬೇಳೆ ಗೆ ಎಂ ಎಸ್ ಪಿ ಎಲ್ಲಿ ಸಂಪೂರ್ಣ ಗರಿಷ್ಠ ಹೆಚ್ಚಳವನ್ನು ಅನುಮೋದಿಸಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಬೇಳೆಗೆ ರೇಪ್ಸೀಡ್ ( ಸಾಸಿವೆ ಜಾತಿಗೆ ಸೇರಿದ ಕಾಳು ) ಮತ್ತು ಸಾಸಿವೆಯನ್ನು 400 ರೂ. ಗಳಷ್ಟು  ಹೆಚ್ಚಿಸಲಾಗಿದೆ.

 ಮುಂಗಾರು (ಬೇಸಿಗೆ )  ಬೆಳೆಗಳ ಕೊಯ್ಲು ಮಾಡಿದ ತಕ್ಷಣ ಹಿಂಗಾರು ( ಚಳಿಗಾಲ) ಅಕ್ಟೋಬರ್ ನಲ್ಲಿ ಪ್ರಾರಂಭವಾಗುತ್ತದೆ.  ಪ್ರಮುಖ ಹಿಂಗಾರು ಬೆಳೆಗಳೆಂದರೆ ಗೋದಿ ಮತ್ತು ಸಾಸಿವೆ.  ಅಧಿಕೃತ ಪ್ರಕಟಣೆ ಪ್ರಕಾರ 2022-23 ಬೆಳೆ ವರ್ಷ(ಜುಲೈ-ಜೂನ್) ಮತ್ತು 2023-24 ಮಾರುಕಟ್ಟೆ ಋತುವಿಗಾಗಿ 6 ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳವನ್ನು Cabinet Committee on Economic Affairs (CCEA) ಅನುಮೋದಿಸಿದೆ.

2021-22 ರ  ಬೆಳೆ ವರ್ಷದಲ್ಲಿ ಕ್ವಿಂಟಾಲ್ ಗೆ 2,015 ರೂಗಳಷ್ಟು ಹೆಚ್ಚಿಸಲಾಗಿದೆ. ಗೋಧಿ ಉತ್ಪಾದನಾ ವೆಚ್ಚ ಪ್ರತಿ ಕ್ವಿಂಟಾಲಿಗೆ  ರೂ.1065  ಎಂದು ಅಂದಾಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆ ನಂತರ ಕೇಂದ್ರದ ನಿರ್ಧಾರಗಳ ಬಗ್ಗೆ ಸುದ್ಧಿಗೋಷ್ಠಿಯಲ್ಲಿ ವಿವರಿಸಿದ  ಅನುರಾಗ್ ಠಾಕೂರ್,  ಗೋಧಿಯ MSP  ಯನ್ನು  ರೂ.110, ಬಾರ್ಲಿ ರೂ.100, ಬೇಳೆ ರೂ.105, ಬೇಳೆ ಅಥವಾ ಮಸೂರ್ ರೂ.500 ರೇಪ್ಸೀಡ್ ಮತ್ತು ಸಾಸಿವೆ ರೂ.400 ಮತ್ತು ಸೂರ್ಯಕಾಂತಿ ಬೀಜ ರೂ.209 ಹೆಚ್ಚಿಸಲಾಗಿದೆ ಎಂದು ಮಾದ್ಯಮಗಳ ಮುಖಾಂತರ ದೇಶದ ಜನಸಾಮಾನ್ಯರಿಗೆ ಹಾಗೂ ರೈತರಿಗೆ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳು

Related Articles