ಹಸಿರೆಲೆ ಗೊಬ್ಬರಗಳ 100 ಕೆ.ಜಿ. ಗಳಲ್ಲಿರುವ ಸಸ್ಯ ಪೋಷಕಾಂಶಗಳು ಈ ಕೆಳಕಂಡಂತಿವೆ.
ಹಸಿರೆಲೆ ಗೊಬ್ಬರಗಳ ಹೆಸರು | ಸಾರಜನಕ | ರಂಜಕ | ಪೊಟ್ಯಾಶ್ |
( ಶೇ.) | ( ಶೇ.) | ( ಶೇ.) | |
ಆಪ್ ಸೆಣಬು | 0.89 | 0.12 | 0.51 |
ಡಯಂಚ | 0.68 | 0.16 | 0.40 |
ಗ್ಲಿರಿಸೀಡಿಯಾ | 0.68 | 0.16 | 0.30 |
ಸಸ್ಬೇನಿಯಾ | 0.70 | 0.14 | 0.75 |
ಹೊಂಗೆ | 0.16 | 0.14 | 0.49 |
ಹೆಸರು | 0.70 | 0.17 | 0.50 |
ಉದ್ದು | 0.82 | 0.18 | 0.52 |
ಈ ಹಸಿರೆಲೆ ಗೊಬ್ಬರಗಳು ಸಾರಜನಕ, ರಂಜಕ, ಪೊಟ್ಯಾಶ್ ಪೋಷಕಾಂಶಗಳೇ ಸುಣ್ಣದ ಅಂಶವನ್ನು ಸಹ ಭೂಮಿಗೆ ಸೇರಿಸುತ್ತವೆ.
ಹಸಿರೆಲೆ ಗೊಬ್ಬರ ಗಳನ್ನು ತಯಾರಿಸುವ ಹಾಗೂ ಅಳವಡಿಸುವ ಬಗೆ
- ಮುಖ್ಯವಾಗಿ ಹಸಿರೆಲೆ ಬೆಳೆಗಳನ್ನು ಮುಂಗಾರು ಬೆಳೆಗಳು ಕಟಾವಾದ ನಂತರ ಅನುಕೂಲವಿರುವ ಅಂತಹ ಪ್ರದೇಶಗಳಲ್ಲಿ ಬೆಳೆದು ಅದೇ ಭೂಮಿಯಲ್ಲಿ ಮಣ್ಣಿನಲ್ಲಿ ಮುಚ್ಚುವುದು ಒಳ್ಳೆಯದು ಹಾಗೂ ಬಹು ಸುಲಭವಾದ ಪದ್ಧತಿ.
- ಹಸಿರೆಲೆ ಪದಾರ್ಥಗಳು ಹೇರಳವಾಗಿ ಸಿಗುವ ಸ್ಥಳಗಳಿಂದ ಇತರೆ ಭೂಮಿಗಳಿಗೆ ಸಾಗಿಸಿ ಮಣ್ಣಿನಲ್ಲಿ ಸೇರಿಸುವುದು ಒಂದು ಉತ್ತಮವಾದ ಪದ್ಧತಿ.
- ಹಸಿರೆಲೆ ಬೆಳೆಗಳನ್ನು ಬಿತ್ತಿದ 8-9 ವಾರಗಳಲ್ಲಿ ಅಂದರೆ ಹೂಬಿಡುವ ಪ್ರಾರಂಭವಾದಾಗ ಕತ್ತರಿಸಿ ನೇಗಿಲು ಸಾಲುಗಳಲ್ಲಿ ಉಳುಮೆಮಾಡಿ ಮುಚ್ಚಬೇಕು. ಈ ಕಾರ್ಯವನ್ನು ಮುಂದಿನ ಮುಖ್ಯ ಬೆಳೆಯನ್ನು ಬಿತ್ತುವುದರ ಪೂರ್ವದಲ್ಲೇ ಮಾಡಬೇಕು.
- ಹಸಿರೆಲೆ ಗೊಬ್ಬರದ ಬೆಳೆಗಳನ್ನು ಬಿತ್ತುವಾಗ ಸೂಪರ್ ಫಾಸ್ಪೇಟ್ ಕೊಡುವುದರಿಂದ ಮುಂದಿನ ಬೆಳೆಗೆ ರಂಜಕವನ್ನು ಒದಗಿಸಿದಂತಾಗುತ್ತದೆ.
ಹಸಿರೆಲೆ ಗೊಬ್ಬರಗಳ ಯಾವ ಯಾವ ಸಂದರ್ಭಗಳಲ್ಲಿ ಹಾಗೂ ಹೇಗೆ ಉಪಯೋಗಿಸಬೇಕು?
ಭತ್ತದ ಗದ್ದೆಯಲ್ಲಿ ಈ ಹಸಿರೆಲೆ ಗೊಬ್ಬರವನ್ನು ಭತ್ತ ನಾಟಿ ಮಾಡುವುದಕ್ಕೆ 3-4 ವಾರಗಳ ಮುಂಚೆಯೇ ಗದ್ದೆಯಲ್ಲಿ ಚೆನ್ನಾಗಿ ತುಳಿಯಬೇಕು. ಗದ್ದೆಯಲ್ಲಿ ತುಳಿದ ತಕ್ಷಣ ನಾಟಿ ಮಾಡಬಾರದು. ನಾಟಿ ಮಾಡಿದಲ್ಲಿ ಪೋಷಕಾಂಶಗಳು ಬೆಳೆಗಳಿಗೆ ದೊರಕುವುದಿಲ್ಲ. ಮಣ್ಣಿನಲ್ಲಿ ತುಳಿದ ನಂತರ ಅದು ಮಣ್ಣಿನ ಕಣಗಳ ಜೊತೆ ಬೆರೆತು ಪೋಷಕಾಂಶಗಳನ್ನು ಬಿಡುಗಡೆ ಮಾಡಲು 3-4 ವಾರಗಳೇ ಬೇಕಾಗುತ್ತದೆ.
ಖುಷ್ಕಿ ಪ್ರದೇಶದಲ್ಲಿ ಅಂದರೆ ಮಳೆಯಾಶ್ರಯದ ಪ್ರದೇಶಗಳಲ್ಲಿ ಎಲೆಗಳನ್ನು ಬೇರೆ ಪ್ರದೇಶದಲ್ಲಿ ಬೆಳೆದು ಕಾಂಪೋಸ್ಟ್ ತಯಾರಿಕೆ ಮಣ್ಣಿನಲ್ಲಿ ಮಿಶ್ರ ಮಾಡಬಹುದು. ನೀರಾವರಿ ಆಶ್ರಯದಲ್ಲೇ ಆಗಲಿ ಅಥವಾ ಮಳೆಯಾಶ್ರಯದ ಪ್ರದೇಶದಲ್ಲಿಯೇ ಆಗಲಿ ಈ ಹಸಿರೆಲೆ ಗೊಬ್ಬರದ ಬೆಳೆಗಳನ್ನು ಬೆಳೆದ ಜಾಗದಲ್ಲಿಯೂ ಸಹ ಕತ್ತರಿಸಿ ಮಣ್ಣಿನಲ್ಲಿ ಸೇರಿಸಬಹುದು. ಹೀಗೆ ಸೇರಿಸಿದ ಒಂದು ತಿಂಗಳಲ್ಲಿ ಅವು ಕೊಳೆತು ಗೊಬ್ಬರವಾಗುತ್ತದೆ.