Saturday, August 30, 2025

ಇ- ಪೌತಿ ಮಾಡದೆ ಇದ್ದರೆ ಸರ್ಕಾರ ಈ ಎಲ್ಲಾ ಯೋಜನೆ ಲಾಭ ಬಂದ್!!

E-Pauti Movement: ಇ- ಪೌತಿ ಮಾಡದೆ ಇದ್ದರೆ ಸರ್ಕಾರ ಈ ಎಲ್ಲಾ ಯೋಜನೆ ಲಾಭ ಬಂದ್!!

ಮೃತಪಟ್ಟ ರೈತರ ಹೆಸರಿನಲ್ಲಿರುವ ಜಮೀನು ಇ-ಪೌತಿ ಮಾಡಿಸಿಕೊಳ್ಳದೇ ಹಾಗೆಯೇ ಬಿಟ್ಟರೇ ಆ ಕುಟುಂಬ ಸರಕಾರದ ಸೌಲಭ್ಯಗಳಿಂದ ವಂಚಿತವಾಗಲಿದ್ದೀರಿ ಎಂಬುದಾಗಿ ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಸಿದೆ.

ಆತ್ಮೀಯ ಪ್ರಿಯಾ ರೈತ ಬಾಂದವರೇ, ರಾಜ್ಯ ಸರ್ಕಾರ ಅದರಲ್ಲೂ ರಾಜ್ಯ ಕಂದಾಯ ಇಲಾಖೆಯ ವತಿಯಿಂದ ಉಚಿತವಾಗಿ ಈ ಕಾರ್ಯ ಮಾಡಲಾಗುತ್ತಿದೆ. ಕೃಷಿ ಜಮೀನುಗಳ ಮಾಲೀಕರು ಸದರ ಜಮೀನನ್ನು ವಾರಸುದಾರರು ತಮ್ಮ ಹೆಸರಿಗೆ ಹಕ್ಕು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. “ಇ ಪೌತಿ ” ಆಂದೋಲನದ ಮೂಲಕ ರಾಜ್ಯದ ಜಮೀನುಗಳನ್ನು ಉಚಿತವಾಗಿ ವಾರಸು ಮಾಡಿ ಪಹಣಿ (RTC)ಉತಾರ ಮಾಡಿಕೊಡಲಾಗುತ್ತಿದೆ.ರಾಜ್ಯದ ಎಲ್ಲಾ ರೈತ ಕುಟುಂಬದವರು ಈ ಆಂದೋಲನವನ್ನು ಸದುಪಯೋಗ ಪಡೆದುಕೊಳ್ಳಿ ಎಂದು ರಾಜ್ಯ ಸರ್ಕಾರ ಮತ್ತು ಇಲಾಖೆ ಉನ್ನತ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಇಲ್ಲ ವಾದಲ್ಲಿ ಸರ್ಕಾರದ ಸೌಲಭ್ಯಗಳು ದೊರೆಯುದಿಲ್ಲ.

ಇದನ್ನೂ ಓದಿ: PM kisan E kyc pending list: ಇಲಾಖೆಯಿಂದ ಕೆವೈಸಿ ಬಾಕಿರುವ ರೈತರ ಪಟ್ಟಿ ಬಿಡುಗಡೆ:

This Government Scheme is not profitable: ಸರ್ಕಾರದ ಯಾವ ಯಾವ ಯೋಜನೆ ಲಾಭ ಕೈ ತಪ್ಪುವುದು!!

1.ಕೃಷಿ ಇಲಾಕೆಯ ಪಿಎಂ ಕಿಸಾನ್ ಸಮ್ಮಾನ,(PM Kisan)
2.ಕೃಷಿ ಇಲಾಖೆಯ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) (Pradhan Mantri Pasal Bhima Scheme)
3.ಬರ ಪರಿಹಾರ ಯೋಜನೆ ಪರಿಹಾರ
4.ಬೆಳೆಸಾಲ


5.ಕೃಷಿ ಯಾಂತ್ರಿಕರಣ ಯೋಜನೆಯಡಿ ಕೃಷಿ ಪರಿಕರಗಳು ಯೋಜನೆ ಲಾಭ
6.ರಸಗೊಬ್ಬರಗಳು
7.ಇಲಾಖೆಯಿಂದ ಬಿತ್ತನೆ ಬೀಜ
8.ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ
9.ಕೃಷಿ ಪ್ರಶಸ್ತಿ ಅರ್ಜಿ
10.ಅತಿವೃಷ್ಟಿಯಿಂದ ಬೆಳೆಹಾನಿಗೊಳ್ಳಗಾದರೆ ಪರಿಹಾರ ದೊರೆಯದು ಹೀಗೆ ಹತ್ತು ಹಲವು ಯೋಜನೆಗಳ ಲಾಭ ನಿಮಗೆ ಸಿಗದೆ ಕೈ ತಪ್ಪುವ ಅವಕಾಶವಿರುತ್ತದೆ. ಅದಕ್ಕಾಗಿ ಎಲ್ಲಾ ಸಾರ್ವಜನಿಕರು “ಇ ಪೌತಿ ” ಆಂದೋಲನದ ಮೂಲಕ ಉಚಿತವಾಗಿ ವಾರಸುದಾರರ ಹೆಸರಿಗೆ ಪಹಣಿ (RTC)ಉತಾರ ಮಾಡಿಕಕೊಳ್ಳಲು ಸರ್ಕಾರ ಕೋರಿದೆ.
ಹೀಗಾಗಿ ಸಂಬಂಧಪಟ್ಟ ಕುಟುಂಬದ ವಾರಸುದಾರರು ಇ-ಪೌತಿ ಆಂದೋಲನದಲ್ಲಿ ಭಾಗವಹಿಸಿ ತಮ್ಮ ಜಮೀನನ್ನು ವರ್ಗಾಯಿಸಿಕೊಳ್ಳಲು ಅವಕಾಶವಿದೆ. ಹೀಗಾಗಿ ರೈತರು ಯಾವುದೇ ಕಾರಣಕ್ಕೂ ಇದನ್ನು ತಪ್ಪಿಸಿಕೊಳ್ಳಬೇಡಿ ಎಂಬುದಾಗಿ ಸರ್ಕಾರ ಮನವಿ ಮಾಡಿದೆ.

ರಾಜ್ಯದಲ್ಲಿ ಮೃತಪಟ್ಟ ಜಮೀನು ಮಾಲೀಕರ ಹೆಸರಿನಲ್ಲಿರುವ ಪಹಣಿಗಳನ್ನು ವಾರಸುದಾರರ ಹೆಸರಿಗೆ ನೋಂದಣಿ ಮಾಡಿಕೊಡಲು ಈ ಹಿಂದಿನಿಂದಲೂ ಅಭಿಯಾನಗಳು ನಡೆದಿವೆ. ಹೋಬಳಿ, ಗ್ರಾಮ ಮಟ್ಟದಲ್ಲಿ ಅಭಿಯಾನ ನಡೆದಿವೆ. ಆದರೂ ಇನ್ನು ಕೆಲವು ಪ್ರಕರಣ ಬಾಕಿ ಇದ್ದು, ಕಂದಾಯ ಇಲಾಖೆ ಸಚಿವರ ನಿರ್ದೇಶನದ ಮೇರೆಗೆ ಮನೆ ಬಾಗಿಲಿಗೆ ಕಂದಾಯ ಸೇವೆಗಳ ‘ಇ-ಪೌತಿ’ ಆಂದೋಲನ ಆರಂಭಿಸಲಾಗಿದೆ.

ಯಾವ ರೀತಿ ಇ-ಪೌತಿ’ ಆಂದೋಲನ ನಡೆಯಲಿದೆ?
ಈ ಯೋಜನೆಯಡಿ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಅಭಿವೃದ್ಧಿ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ತೆರಳಿ, ವಾರಸುದಾರರಿಗೆ ಮೊಬೈಲ್ ಮೂಲಕ ಪೌತಿ ಖಾತೆಯನ್ನು ನೋಂದಾಯಿಸಲಿದ್ದಾರೆ. ಈ ಪ್ರಕ್ರಿಯೆಯಲ್ಲಿ ಆಧಾರ್ ಸೀಡಿಂಗ್‌ನ ಮೂಲಕ ಭೂಮಿ ಹಿಡುವಳಿಯ ನಿಖರ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.

ಇದನ್ನೂ ಓದಿ: ಕೇಂದ್ರದಿಂದ ಈ ಯೋಜನೆಯಡಿ 78000/-ರೂ ಸಹಾಯಧನ.

Required Documents: ಬೇಕಾದ ದಾಖಲೆಗಳು:
ಮೃತರ ಮರಣ ದಾಖಲೆ (Death certificate)
ವಂಶವೃಕ್ಷ
ವಾರಸುದಾರರ ಆಧಾರ್‍ ಕಾರ್ಡ (Aadhar card)
ಇತ್ಯಾದಿ ದಾಖಲೆಗಳು

ಜಿಲ್ಲೆಯಲ್ಲಿ ಮೃತಪಟ್ಟ 75,000 ಜಮೀನುಗಳ ಮಾಲೀಕರ ಪಹಣಿಗಳನ್ನು ವಾರಸುದಾರರ ಹೆಸರಿಗೆ ನೋಂದಣಿ ಮಾಡಿಕೊಡಲು ಇ-ಪೌತಿ ಆಂದೋಲನವನ್ನು ಆರಂಭಿಸಿದೆ. ಆಧಾರ್ ಜೋಡಣೆಯಿಂದ ಕೃಷಿ ಭೂಮಿಯ ಪ್ರಮಾಣ, ರೈತರ ಭೂ ಹಿಡುವಳಿ, ಮತ್ತು ಸಣ್ಣ ಹಾಗೂ ಅತಿ ಸಣ್ಣ ರೈತರ ಸಂಖ್ಯೆಯ ಬಗ್ಗೆ ನಿಖರ ಅಂಕಿ-ಅಂಶಗಳು ಲಭ್ಯವಾಗಲಿವೆ.

ಇತ್ತೀಚಿನ ಸುದ್ದಿಗಳು

Related Articles