Tuesday, July 1, 2025

ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಅತೀ ಮುಖ್ಯವಾದ ಪ್ರಕಟಣೆ !!!

ಅಡಿಕೆ ಬೆಳೆಗೆ ಅನುಸರಿಸಬೇಕಾದ ಬೇಸಾಯ, ಸಸ್ಯ ಸಂರಕ್ಷಣಾ ಕ್ರಮಗಳ ಕುರಿತು ಮಾಹಿತಿ
ಆತ್ಮೀಯ ರೈತ ಬಾಂದವರೇ, ಮಳೆಗಾಲದ ಸಮಯದಲ್ಲಿ ಮುಖ್ಯವಾಗಿ ರೈತರು ಅನುಸರಿಸಬಹುದಾದ ಕೆಲವು ಮುಖ್ಯವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿರುತ್ತದೆ.

Improved practices followed in Areca Nut cultivation: ಅಡಿಕೆ ಬೆಳೆಯಲ್ಲಿ ಅನುಸರಿಸಬೇಕಾದ ಬೇಸಾಯ ಹಾಗೂ ಸಸ್ಯ ಸಂರಕ್ಷಣಾ ಕ್ರಮಗಳ ಬಗ್ಗೆ ಮಾಹಿತಿಯನ್ನು ಈ ಕೆಳಗಿನಂತೆ ನೀಡಿರುತ್ತಾರೆ.
1.ಮೇ ತಿಂಗಳಿನಲ್ಲಿ ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಬಸಿಗಾಲುವೆ ಸ್ವಚ್ಛ ಮಾಡಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವುದು.
2.ಕೆಳಗೆ ಬಿದ್ದಿರುವ ರೋಗ ಪೀಡಿತ ಕಾಯಿ ಹಾಗೂ ಒಣಗಿದ ಹಿಂಗಾರುಗಳನ್ನು ಆರಿಸಿ ತಗೆದು ಸುಡುವುದು ಅಥವಾ ಗುಂಡಿಗಳಲ್ಲಿ ಹಾಕಿ ಮಣ್ಣಿನಿಂದ ಮುಚ್ಚಬೇಕು.
3.ಅಡಿಕೆ ಕೊಯ್ಲಿನ ಸಮಯದಲ್ಲಿ ಒಣಗಿಸಿದ ರೋಗ ಪೀಡಿತ ಹಿಂಗಾರುವನ್ನು ಕಡ್ಡಾಯವಾಗಿ ತಗೆಯುವುದು.
4.ತೋಟದಲ್ಲಿ ಗಾಳಿ ಮತ್ತು ಬೆಳಕು ಸೂಕ್ತ ಪ್ರಮಾಣದಲ್ಲಿ ಲಭ್ಯವಾಗುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯುವುದು.


ಮುಂಜಾಗ್ರತಾ ಕ್ರಮವಾಗಿ ಜೂನ್ ತಿಂಗಳಿನಲ್ಲಿ ಶೇ. 1 ರ ಬೋರ್ಡೋ ದ್ರಾವಣದಿಂದ ಗೊನೆ, ಎಲೆ ತೊಟ್ಟು, ಹೊಡೆ ಭಾಗ ಮತ್ತು ಸುಳಿ ಭಾಗಗಳು ಸೂಕ್ತ ಅಂಟಿನೊಂದಿಗೆ (ರಾಳ) ಸಿಂಪರಣೆ ಮಾಡಿ ದ್ರಾವಣದ ರಸಸಾರ 8 ಇರುವಂತೆ ಜಾಗರೂಕತೆ ವಹಿಸಿಬೇಕು. ದ್ರಾವಣ ಸಿಂಪರಣೆ ಮಾಡುವಾಗ ಸೂಕ್ಷ್ಮ ಹನಿಗಳಾಗಿದ್ದರೆ ಸೂಕ್ತ. ಎಂದು ಉತ್ತರ ಕನ್ನಡ ಜಿಲ್ಲೆ , ಸಿದ್ದಾಪುರ ತಾಲೂಕಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Sheep and Goat farming training: ಉಚಿತ ಹೈಟೆಕ್ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

Recommendations Based on Soil Sample : 1.ಮಣ್ಣು ಪರೀಕ್ಷೆ ಆಧಾರದ ಮೇಲೆ ಶಿಫಾರಸ್ಸು ಮಾಡಿದ ಕೃಷಿ ಸುಣ್ಣವನ್ನು ಸೆಪ್ಟೆಂಬರ್ ತಿಂಗಳಲ್ಲಿ ಬಳಸಬೇಕು.
2.ಕೃಷಿ ಸುಣ್ಣ ಬಳಸಿದ 21 ದಿನಗಳ ನಂತರ ಸಾವಯವ ಗೊಬ್ಬರ (ಪ್ರತಿ ಮರಕ್ಕೆ 10-12 ಕಿ.ಗ್ರಾಂ) ಮತ್ತು ರಾಸಾಯನಿಕ ಗೊಬ್ಬರಗಳನ್ನು (3 ವರ್ಷ ಹಾಗೂ ಮೇಲ್ಪಟ್ಟ ವಯಸ್ಸಿನ ಪ್ರತಿ ಮರಕ್ಕೆ 100:40:140 ಗ್ರಾಂ ಸಾರಜನಕ: ರಂಜಕ:ಪೊಟ್ಯಾಷ್ ಕೊಡುವುದಾಗಿ ತಿಳಿಸಿರುತ್ತಾರೆ.
3.ರಾಸಾಯನಿಕ ಗೊಬ್ಬರವನ್ನು ಜೂನ್ ಮತ್ತು ಅಕ್ಟೋಬರ್ತಿಂಗಳಿನಲ್ಲಿ ಸಮ ಪ್ರಮಾಣದಲ್ಲಿ ವಿಭಜಿಸಿ ನೀಡುವುದು.
4.ಬೋರ್ಡೋ ದ್ರಾವಣ ಸಿಂಪರಣೆ ಮಾಡುವುದರಿಂದ ಕೊಳೆರೋಗ ಬರುವುದನ್ನು ತಡೆಗಟ್ಟಬಹುದಾಗಿದೆ.
ತೀವ್ರವಾಗಿ ಕೊಳೆರೋಗ ಕಾಣಿಸಿಕೊಂಡಲ್ಲಿ ಬೋರ್ಡೋ ಬದಲು ಶಿಫಾರಿತ ಶೀಲೀಂದ್ರನಾಶಕಗಳನ್ನು ನಿಯಂತ್ರಣಕ್ಕೆ ಬಳಸುವುದು ಅನಿವಾರ್ಯವಾಗುತ್ತದೆ.

ಅಡಿಕೆ ಬೆಳೆಯಲ್ಲಿ ಅನುಸರಿಸುವ ಇನ್ನೂ ಹೆಚ್ಚಿನ ಪ್ರಮುಖ ಅಂಶಗಳು:
1.ಶೇ. 1 ಬೊರ್ಡೋ ದ್ರಾವಣ ಸಿಂಪರಣೆ ಆಗಿ 25-30 ದಿನಗಳಾದಲ್ಲಿ ಮತ್ತೊಮ್ಮೆ ಶೇ ರ ಬೋರ್ಡೋ ದ್ರಾವಣ ಅಥವಾ ಮ್ಯಾಂಡಿಪ್ರೊಪಾಮಿಡ್ ಮಿಲೀ ಪ್ರತಿ ಲೀ ನೀರಿನ ಜೊತೆ ಅಂಟು ದ್ರಾವಣ ಮಿಲೀ ಹಾಕಿ ಸಿಂಪರಣೆ ನೀಡುವುದು.

ಅಲ್ಲಲ್ಲಿ ಅಡಿಕೆ ತೋಟದಲ್ಲಿ ಕೊಳೆ ರೋಗ ಕಾಣಿಸಿಕೊಂಡಲ್ಲಿ ಪ್ರಥಮವಾಗಿ ಮೆಟಲಾಕ್ಸಿಲ್ 35 W 1 ಗ್ರಾಂ ಪ್ರತಿ ಲೀ ನೀರಿಗೆ ಅಥವಾ ಮೆಟಲಾಕ್ಸಿಲ್+ಮ್ಯಾಂಕೊಜೆನ್ ಇರುವ ಶೀಲಿಂದ್ರ ನಾಶಕವನ್ನು 2 ಗ್ರಾಂ ಪ್ರತಿ ಲೀ ನೀರಿಗೆ ಹಾಗೂ ಅಂಟು ದ್ರಾವಣ | ಮಿಲೀ ಬೆರೆಸಿ ರೋಗ ಪೀಡಿತ ಮರಗಳು ಹಾಗೂ ಸುತ್ತಲಿನ 4-6 ಮರಗಳ ಅಡಿಕೆಗೊನೆಗಳಿಗೆ ಹಾಗೂ ಎಲೆಗಳಿಗೂ ಸಿಂಪಡಿಸಿ. ಮತ್ತು ಒಂದು ವಾರದೊಳಗೆ ಶೇ | ರ ಬೊರ್ಡೋ ದ್ರಾವಣ ಅಥವಾ ಮ್ಯಾಂಡಿಪ್ರೊಪಾಮಿಡ್ 1 ಮಿಲೀ ಪ್ರತಿ ಲೀ ನೀರಿನ ಜೊತೆ ಅಂಟು ದ್ರಾವಣ | ಮಿಲೀ ಹಾಕಿ ಸಿಂಪರಣೆ ನೀಡುವುದು.

ಇದನ್ನೂ ಓದಿ: ಕಳೆದ ವರ್ಷದ ನಿಮ್ಮ ಬೆಳೆ ವಿಮೆ ಅರ್ಜಿ ಸ್ಥಿತಿ ಪರೀಕ್ಷಿಸಿ :

  1. 1.ತೀವ್ರ ಕೊಳೆರೋಗ ಕಂಡುಬಂದಲ್ಲಿ ಮೆಟಲಾಕ್ಸಿಲ್+ಮ್ಯಾಂಕೊಜೆಬ್ ಇರುವ ಶೀಲಿಂದ್ರ ನಾಶಕವನ್ನು 2 ಗ್ರಾಂ ಪ್ರತಿ ಲೀ ನೀರಿಗೆ ಅಥವಾ ಮೆಟಲಾಕ್ಸಿಲ್ 35 & 1ಗ್ರಾಂ ಪ್ರತಿ ಲೀ ನೀರಿಗೆ ಹಾಗೂ ಅಂಟು ದ್ರಾವಣ ಮಿಲೀ ಬೆರೆಸಿ ಅಡಿಕೆಗೊನೆಗಳಿಗೆ ಹಾಗೂ ಎಲೆಗಳಿಗೂ ಸೇರಿ ಸಂಪೂರ್ಣ ತೋಟಕ್ಕೆ ಸಿಂಪಡಿಸಿ. 10-12 ದಿನದ ಒಳಗೆ ಮಳೆ ಬಿಡುವಿದ್ದಾಗ ಶೇ 1 ರ ಬೊರ್ಡೋ ದ್ರಾವಣ ಅಥವಾ ಮ್ಯಾಂಡಿಪ್ರೊಪಾಮಿಡ್ | ಮಿಲೀ ಪ್ರತಿ ಲೀ ನೀರಿನ ಜೊತೆ ಅಂಟು ದ್ರಾವಣ 1 ಮಿಲೀ ಹಾಕಿ ಸಂಪೂರ್ಣ ತೋಟಕ್ಕೆ ಸಿಂಪರಣೆ ನೀಡುವುದು.
  2. 2.ಸರಿಯಾಗಿ ಬಸಿಗಾಲುವೆ ನಿರ್ವಹಿಸುವುದು ಮತ್ತು ರೋಗಪೀಡಿತ ಅಡಿಕೆಯನ್ನು ತೆಗೆದು ತೋಟದಿಂದ ಹೊರಕ್ಕೆ ಹಾಕುವುದು.
  3. 3.ಸಪ್ಟೆಂಬರ್‌ನಲ್ಲಿ ಡೊಲೊಮೈಟ್ ಸುಣ್ಣ 1 ಕೆಜಿ ಪ್ರತಿ ಅಡಿಕೆ ಮರದ ಬುಡಕ್ಕೆ ನೀಡುವುದು.
  4. 4.ಸುಣ್ಣ ನೀಡಿದ 25-30 ದಿನದಲ್ಲಿ ಶಿಫಾರಸು ಮಾಡಿದ ಪೋಷಕಾಂಶ ನೀಡುವುದು.

ಇದನ್ನೂ ಓದಿ: PM Kisan ಮುಂದಿನ ಕಂತಿನ ಹಣ ಬರಬೇಕೇ ತಪ್ಪದೇ ಈ ಕೆಲಸ ಇಂದೇ ಮಾಡಿ!!!

Steps to Follow in Pepper cultivation: ಕಾಳುಮೆಣಸು ಬೆಳೆಯ ಅನುಸರಿಸಬಹುದಾದ ಕೆಲವು ಸುಧಾರಿತ ಕ್ರಮಗಳು :

  1. 1.ಶೀಘ್ರ ಸೊರಗು ರೋಗಕ್ಕೆ ರೋಗ ಕಂಡುಬರದಿದ್ದಲ್ಲಿ ಶೇ 1 ರ ಬೊರ್ಡೋ ದ್ರಾವಣ ಸಿಂಪರಣೆ ಆಗಿ 25-30 ದಿನಗಳಾದಲ್ಲಿ ಮತ್ತೊಮ್ಮೆ ಶೇ 1 ರ ಬೋರ್ಡೋ ದ್ರಾವಣ ಸಿಂಪರಣೆ ನೀಡುವುದು. ಶೀಘ್ರ ಸೊರಗು ರೋಗ ಕಂಡುಬಂದಲ್ಲಿ ಮೆಟಲಾಕ್ಸಿಲ್ 35 WS 1 ಗ್ರಾಂ ಪ್ರತಿ ಲೀಟರ್ ನೀರಿಗೆ ಅಥವಾ ಮೆಟಲಾಕ್ಸಿಲ್+ಮ್ಯಾಂಕೊಜೆಬ್ ಇರುವ ಶೀಲಿಂದ್ರ ನಾಶಕವನ್ನು 2 ಗ್ರಾಂ ಪ್ರತಿ ಲೀ ನೀರಿಗೆ ಹಾಗೂ ಅಂಟು ದ್ರಾವಣ ತಿಮಿಲೀ ಬೆರೆಸಿ ಸಿಂಪರಣೆ ನೀಡುವುದು. 10-15 ದಿನದ ಒಳಗೆ ಮಳೆ ಬಿಡುವಿದ್ದಾಗ ಶೇ 1 ರ ಬೊರ್ಡೋ ದ್ರಾವಣ ಸಿಂಪರಣೆ ನೀಡುವುದು.

2 ಸಪ್ಟೆಂಬರ್‌ನಲ್ಲಿ ಟ್ರೈಕೋಡರ್ಮಾ 50 ಗ್ರಾಂ ಮತ್ತು ಬೇವಿನ ಹಿಂಡಿ 2 ಕೆಜಿ ಮಿಶ್ರಣವನ್ನು ಪ್ರತಿ ಬಳ್ಳಿಗೆ ನೀಡುವುದು.

ಹೆಚ್ಚಿನ ಮಾಹಿತಿಯನ್ನು ತಾಲೂಕು ತೋಟಗಾರಿಕೆ ಕಛೇರಿಯಿಂದ ಪಡೆಯುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳು

Related Articles