Friday, January 24, 2025

ಕರ್ನಾಟಕ ಬಜೆಟ್ 2023 ಪ್ರಮುಖ ಅಂಶಗಳು ಬಗ್ಗೆ ತಿಳಿಯೋಣ.

2023-24 ನೇ ಸಾಲಿನ ಅವ್ಯಯವ ಬಜೆಟ್ ಮಂಡಿಸಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೃಷಿ ಕ್ಷೇತ್ರಕ್ಕೆ ಮತ್ತು ಇತರ ಕ್ಷೇತ್ರಕ್ಕೆ ನೀಡಿರುವ ಅನುದಾನ ಬಗ್ಗೆ ತಿಳಿಯೋಣ.

ಕೃಷಿ: ರಾಜ್ಯದ ರೈತರಿಗೆ 5 ಲಕ್ಷದವರೆಗೂ ಬಡ್ಡಿ ರಹಿತ ಅಲ್ಪಾವದಿ ಸಾಲ ನೀಡಲು ಮಹತ್ವದ ಘೋಷಣೆಯನ್ನು ಮಾಡಿದೆ.
ಈ ಬಾರಿಯ ಬಜೆಟ್ ನಲ್ಲಿ ರೈತರಿಗೆ ಬಂಪರ್‍ ಕೊಡುಗೆ ನೀಡಲಾಗಿದೆ.ಹಿಂದೆ ರೈತರಿಗೆ ಮೂರು ಲಕ್ಷ ಸಾಲ ಬಡ್ಡಿ ರಹಿತ ಅಲ್ಪಾವದಿ ಸಾಲ ನೀಡಲಾಗುತ್ತಿತ್ತು. ಇಂದಿನಿಂದ ಆ ಸಾಲವನ್ನು 5 ಲಕ್ಷದವರೆಗೂ ನೀಡಲು ಬಜೆಟ್
ನಲ್ಲಿ ಮಂಡಿಸಿದ್ದಾರೆ. ಜೊತೆಗೆ ಈ ವರ್ಷ ಅಂದಾಜು 30 ಲಕ್ಷ ರೈತರಿಗೆ 25 ಸಾವಿರ ಕೋಟಿ ರೂ. ಗಳಷ್ಟು ಸಾಲ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಶಿಕ್ಷಣ ಕ್ಷೇತ್ರ: ಸರಕಾರಿ ಅನುದಾನದಡಿ ಬರುವ ಎಲ್ಲಾ ಕಾಲೇಜುಗಳಲ್ಲಿ ಸಂಪೂರ್ಣ ಶುಲ್ಕ ರಿಯಾಯಿತಿಯಲ್ಲಿ ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆಯಡಿ ಸರ್ಕಾರಿ ಶುಲ್ಕ ವಿನಾಯಿತಿ ನೀಡಲಾಗಿದೆ. ಇದರಿಂದ ರಾಜ್ಯದ ಎಂಟು ಲಕ್ಷ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ. ಜೊತೆಗೆ ಸಾರಿಗೆ ನಿಗಮಗಳ ಮೂಲಕ ನೂರು ಕೋಟಿ ರೂ. ವೆಚ್ಚದಲ್ಲಿ ಮಕ್ಕಳ ಬಸ್ಸು ಎಂಬ ಯೋಜನೆ ಆರಂಭಿಸುವ ಬಗ್ಗೆ ಬಜೆಟ್ನಲ್ಲಿ ಘೊಷಿಸಿದ್ದಾರೆ.ಇದರಿಂದ ಸುಮಾರು ಎರಡು ಲಕ್ಷ ಕಾಲೇಜು ಮಕ್ಕಳಿಗೆ ಉಪಯೋಗವಾಗಲಿದೆ.

ಗ್ರಾಮ ಪಂಚಾಯಿತಿಗಳಿಗೆ ಶಕ್ತಿ: ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಅರವತ್ತು ಲಕ್ಷ ಹಣ ನೀಡಲು ತಿರ್ಮಾನಿಲಾಗಿದೆ. ವಿಕೇಂದ್ರಿಕೃತ ಆಡಳಿತ ವ್ಯವಸ್ಥೆಯನ್ನು ಸಶಕ್ತಗೊಳಿಸುವ ಸಲುವಾಗಿ ಪ್ರತಿ ಗ್ರಾಮ ಪಂಚಾಯಿತಿಗಳಿಗೆ 22 ರಿಂದ 60. ಲಕ್ಷ ರೂ ಹಣ ನೀಡಲು 780 ಕೋಟಿ ರೂಪಾಯಿಗಳ ವಿಶೇಷ ಅನುದಾನ ಕೊಡಲು ಘೋಷಣೆ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ದಿ ಮಾಡಲು ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 25 ಕಿ ಮೀ ರಸ್ತೆ ಮಾಡಲು 300. ಕೋಟಿ ರೂ. ವೆಚ್ಚ ಮಾಡಲು ಬಜೆಟ್ ನಲ್ಲಿ ಹೇಳಲಾಗಿದೆ.

ಪಶು ಇಲಾಖೆ: ಸಂಚಾರಿ ಪಶು ಚಿಕಿತ್ಸಾ ಘಟಕದಡಿ 290 ವಾಹನಗಳ ಆರಂಭ ರಾಜ್ಯದಲ್ಲಿ 290 ಸಂಚಾರಿ ಪಶುಚಿಕಿತ್ಸಾಲಯಗಳ ಆರಂಭ ಮಾಡಲು ತೀರ್ಮಾನಿಲಾಗಿದೆ. ಇನ್ನು ಜಾನುವಾರಗಳಲ್ಲಿ ಕಾಣಿಸುತ್ತಿರುವ ಚರ್ಮಗಂಟು ಸೋಂಕು ತಡೆಗಟ್ಟಲು ಈಗಾಗಲೇ ಲಸಿಕೆ ನೀಡಲಾಗಿರುತ್ತೆ.ಜೊತೆಗೆ ಸೋಂಕಿನಿಂದ ಮರಣ ಹೊಂದಿದ ಹಸುಗಳ ಮಾಲೀಕರಿಗೆ ಪರಿಹಾರಕ್ಕಾಗಿ 55 ಕೋಟಿ ರೂ. ಬಜೆಟ್ ನಲ್ಲಿ ಇಡಲಾಗಿದೆ.

ಇದನ್ನೂ ಓದಿ: ಇಲಾಖೆಯಿಂದ ರೈತರಿಗೆ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್ ಖರೀದಿಗೆ ಸಹಾಯಧನದಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ

ಕೃಷಿ ಕಾರ್ಮಿಕ ಮಹಿಳೆಯರಿಗೆ: ಮಹಿಳಾ ಸಬಲೀಕರಣದಡಿ ಕೃಷಿ ಮಹಿಳೆಯರಿಗೆ ತಿಂಗಳಿಗೆ 500 ರೂ.ಸಹಾಯಧನ ನೀಡಲು , ಮತ್ತು ಮಹಿಳಾ ಸಾಲ ಸೌಲಭ್ಯ ಹೆಚ್ಚಿಸುವ ಯೋಜನೆ, 45 ಸಾವಿರ ಹೊಸ ಶಿಶುವಿಹಾರ ಸ್ಥಾಪನೆಗೆ, ಅಂಗನವಾಡಿ ಸಹಾಯಕಿ,ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ ಹಾಗೂ ಆರೋಗ್ಯ ವೆಚ್ಚ ಭರಿಸಲು 50 ಸಾವಿರ ರೂಪಾಯಿ ಅನುದಾನವನ್ನು ಬಜೆಟ್ನಲ್ಲಿ ಮೀಸಲಿಟ್ಟಿದ್ದಾರೆ.

ವಸತಿ ಯೋಜನೆ: ಸರ್ವರಿಗೂ ಸೂರು ಕಟ್ಟವ ಸಲುವಾಗಿ ಈ ಆರ್ಥಿಕ ವರ್ಷದಲ್ಲಿ 5000 ಸಾವಿರ ಕೋಟಿ ರೂ. ವೆಚ್ಚದಲ್ಲಿ 5 ಲಕ್ಷ ಮನೆಗಳ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ತಿರ್ಮಾನಿಲಾಗಿದೆ. ಬೆಂಗಳೂರು. ರಾಜ್ಯದ ರಾಜಧಾನಿಯಲ್ಲಿ 20,000 ಮನೆಗಳನ್ನು ಕಟ್ಟಿಸಿ ಫಲಾನುಭವಿಗಳಿಗೆ ನೀಡಲು ಯೋಜನೆಯನ್ನು ಮಾಡಲಾಗಿದೆ,ಮನೆಯನ್ನು ಆನ್ ಲೈನ್ ನಲ್ಲಿ ಆಯ್ಕೆ ಮಾಡಿಕೊಳ್ಳವ ಪಾರದರ್ಶಕ ವ್ಯವಸ್ಥೆಯನ್ನು ಕಲ್ಪಿಸಲಗುವುದು ಎಂದು ಬಜೆಟ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕೈಗಾರಿಕೆ ವಲಯ ಸ್ಥಾಪನೆ: ಈ ವರ್ಷ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮದ ವತಿಯಿಂದ ಉತ್ತರ ಕನ್ನಡ ಜಿಲ್ಲಿಯ ಕೋಡ್ಕಣಿ, ಬೆಳಗಾವಿ ಜಿಲ್ಲೆಯ ಕಣಗಲಾ, ಚಾಮರಾಜನಗರದ ಬದನೆಗುಪ್ಪೆ, ಕಲಬುರಗಿಯ ಚಿತ್ತಾಪುರ, ತುಮಕೂರಿನ ಬೈರಗೊಂಡನಹಳ್ಳಿ-ಚಿಕ್ಕನಾಯಕನಹಳ್ಳಿ, ಬೀದರ್‍ನ ಹುಮನಾಬಾದ್, ರಾಯಚೂರು ಗ್ರಾಂತರ , ವಿಜಯಪುರ ಹೂವಿನಹಿಪ್ಪರಗಿ ಮತ್ತು ಚಿತ್ರದುರ್ಗದ ಮೊಳಕಾಲ್ಮೂರು ನಲ್ಲಿ 9 ಹೊಸ ಕೈಗಾರಿಕೆ ವಸಹಾತುಗಳನ್ನು ಸ್ಥಾಪಿಸಲು ತಿರ್ಮಾನಿಲಾಗಿದೆ.

ದೇವಸ್ಥಾನ ಅಭಿವೃದ್ದಿಗೆ ಅನುದಾನ: ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸುವ ಮೂಲಕ ರಾಜ್ಯದ ಅನೇಕ ದೇವಸ್ಥಾನಗಳನ್ನು ಅಬಿವೃದ್ದಿ ಪಡಿಸಲು ತಿರ್ಮಾನಿಸಲಾಗಿದೆ.
ಅದರಲ್ಲಿ ಕೊಪ್ಪಳ ಜಿಲ್ಲೆಯ ಆಂಜನಾದ್ರಿ ಬೆಟ್ಟದಲ್ಲಿ 100 ಕೋಟಿ ವೆಚ್ಚದಲ್ಲಿ ಮೂಲ ಸೌಕರ್ಯ ಮತ್ತು ದೇವಾಲಯ ಅಭಿವೃದ್ದಿಗಾಗಿ ಅನುದಾನ ಒದಗಿಸಲಾಗಿರುತ್ತೆ.ಜೊತೆಗೆ ಮೈಸೂರಿನ ಚಾಮುಂಡಿ ಬೆಟ್ಟ, ಹಂಪಿಯ ವಿಜಯ ವಿಠಲ ದೇವಾಲಯ, ಪುರಂದರ ಮಂಟಪ, ಚಿಕ್ಕಬುಳ್ಳಾಪುರದ ಭೋಗ ನಂದೀಶ್ವರ ದೇವಾಲಯ, ಗಾಣಪುರದ ದತ್ತಕ್ಷೇತ್ರ ದೇವಾಲಯ,ಬನವಾಸಿ ಮಧುಕೇಶ್ವರ ದೇವಾಲಯ ಅಭಿವೃದ್ಧಿಗೆ ರಾಜ್ಯ ಬಜೆಟ್ ನಲ್ಲಿ ಅನುದಾನ ಈ ವರ್ಷದ ಆರ್ಥಿಕ ವರ್ಷದಲ್ಲಿ ಅನುದಾನ ಒದಗಿಸಲಾಗುವುದು ಎಂದು ರಾಜ್ಯದ ಹಣಕಾಸು ಮಂತ್ರಿ ಮತ್ತು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳು

Related Articles