ನಾವು ಬೆಳೆಯುವ ಬೆಳೆಗಳಿಗೆ ಬೀಜದಿಂದ ಹಿಡಿದು ಕೊಯ್ಲು ಮಾಡಿ ಸಂಗ್ರಹಣೆ ಹಂತದವರೆಗೆ ವಿವಿಧ ತರಹದ ಪೀಡೆಗಳಿಂದ ತೊಂದರೆಯುಂಟಾಗಿ ಬೆಳೆಯ ಇಳುವರಿ ಹಾಗೂ ಗುಣಮಟ್ಟದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.
ಈ ತೊಂದರೆಗಳು ಕೀಟನುಸಿ, ಪಶು-ಪಕ್ಷಿ, ಶೀಲೀಂದ್ರ, ದುಂಡಾಣು, ನಂಜಾಣು, ಜಂತು, ಕಳೆ-ಕಸ ಹಾಗೂ ನಿಸರ್ಗ ವಿಕೋಪಗಳಿಂದುಂಟಾಗುವುದು ಕಂಡು ಬಂದಿದೆ.ನಮ್ಮ ದೇಶದಲ್ಲಿ ಪ್ರತಿ ಶತ ಸುಮಾರು 15-20 ರಷ್ಟು ಕೀಟ ರೋಗ ಹಾಗೂ ಕಳೆ ಕಸಗಳಿಂದ ಆಗುವುದೆಂದು ಅಂದಾಜು ಮಾಡಲಾಗಿದೆ.
ಸಾಮಾನ್ಯವಾಗಿ ಬೆಳೆಗಳನ್ನು ಪೀಡೆಗಳಿಂದ ರಕ್ಷಿಸಲು
1) ಕೀಟ ನೀರೋಧಕ ತಳಿಗಳ ಬಳಕೆ
2) ಸರಿಯದ ಬೇಸಾಯ ಕ್ರಮಗಳು (ಬಿತ್ತುವ ಸಮಯಕಾಲ ಇತ್ಯಾದಿ)
3) ಕಾನೂನು ಕ್ರಮಗಳು ಹಾಗೂ ಕೊನೆಯ ಹಂತವಾಗಿ
4) ರಾಸಾಯನಿಕ ಪೀಡೆನಾಶಕಗಳ ಬಳಕೆ (ಕೀಟ/ರೋಗ/ಕಳೆ ನಾಶಕಗಳು) ಇತ್ಯಾದಿ ಪದ್ದತಿಗಳನ್ನು ಅಳವಡಿಸಿಕೊಳ್ಳುತ್ತೆವೆ.
ಇತ್ತೀಚೆಗೆ ಅಂದರೆ ಸುಮಾರು 30 ವರ್ಷಗಳಿಂದ ಹೆಚ್ಚಾಗಿ ನಾವು ರಾಸಾಯನಿಕ ಪೀಡೆನಾಶಕಗಳನ್ನೆ ಬಳಸುತ್ತಿದ್ದೆವೆ. ಹಿತಮಿತವಿಲ್ಲದ ರಾಸಾಯನಿಕ ಪೀಡೆನಾಶಕಗಳ ಬಳಕೆಯಿಂದ ಆದ/ಆಗುತ್ತಿರುವ ಅನೇಕ ತೊಂದರೆಗಳೆನೆಂದರೆ.
1 ಆಹಾರ, ನಿರು, ಗಾಳಿ, ಮಣ್ಣು, ವಾತಾವರಣ ಕಲುಷಿತವಾಗುವುದು.
2 ಪೀಡೆಗಳಲ್ಲಿ ನಿರೋಧಕ ಶಕ್ತಿ ಬೆಳವಣಿಗೆ
3 ಕೀಟಸೂಕ್ಷ್ಮಾಣುಗಳ ನಾಶ ಇತ್ಯಾದಿ. ಹೀಗಾಗಿ ಜೈವಿಕ ಪೀಡೆ ಹತೋಟಿಗೆ ಮಹತ್ವ ಬರುತ್ತಿದೆ.
ಜೈವಿಕ ಪೀಡೆನಾಶಕ’ ಎಂಬ ಶಬ್ದ ಹತೋಟಿ ಮಾಡಲು ಸಾಮಾನ್ಯವಾಗಿ ಬಳಸುವ ಎಲ್ಲಾ ಜೈವಿಕ ವಸ್ತು ಹಾಗೂ ಸೂಕ್ಷ್ಮಾಣುಜೀವಿಗಳಿಗೆ ಅನ್ವಯಿಸುತ್ತದೆ. ಜೈವಿಕ ಪೀಡೆನಾಶಕವನ್ನು ಈ ಕೆಳಗಿನಂತೆ ವಿಂಗಡಿಸಬಹುದು.
1.ಪರೋಪಜೀವಿಗಳು: ಟ್ರೈಕೋಗ್ರಾಮ್
2.ಪರಭಕ್ಷಕಗಳು :ಗುಲಗಂಜಿ, ಹುಳ, ಜೇಡ
3.ಸೂಕ್ಷ್ಮಜೀವಿಗಳು : a ನಂಜಾಣು-ನ್ಯೂಕ್ಲಿಯರ್ಪಾಲಿ ಹೈಡ್ರೋಸಿಸ್ವೈರಸ್, (ಎನ್. ಪಿ.ವಿ) ಗ್ರಾನು ಲೋಸಿಸಿ ವೈರಸ್ (ಜಿವಿ.) b ದಂಡಾಣು-ಬ್ಯಾಸಿಲಸ್ತುರಿಂಜೆನ್ನಸ್ (ಬಿ.ಟಿ.) c ಶೀಲೀಂದ್ರ-ಮೆಟರೈಜಿಯಂ ಅಯನಿಸೋಪ್ಲಿಯ ಬಾವೇರಿಯಾ ಬೆಸ್ಸಿಯಾನಾವರ್ಟಿ ಸಿಲಿಯಂಲ್ಯಾಕಾನಿ ನೋಮರಿಯಾರಿಲೈ. d ಪ್ರೋಟೋಜೋವಾರ್ಯಾಬ್ಡಿಟಿಸ್ಸ್ಟಿ, ವೈರಿಮಾರ್ಫಾನೆಕ್ವಾರಿಕ್ಸಸೊನೇನಿಮಾಫೆಲ್ವಿಯೋ.
4. ಸಸ್ಯ್ಜನ್ಯ :ಬೇವು ತಾಂಬಾಕು, ಹೊಂಗೆ, ಸೀತಾಫಲ, ಚೈನಾಬೆರ್ರಿ ಇತ್ಯಾದಿ.